Showing posts with label KPSC. Show all posts
Showing posts with label KPSC. Show all posts

Wednesday, 26 April 2017

ಪ್ರಚಲಿತ ವಿದ್ಯಮಾನ : 26 ಏಪ್ರಿಲ್ 2017 : ಮಲೇರಿಯಕ್ಕೆ ಮೊದಲ ಲಸಿಕೆ

ಮಲೇರಿಯಾ ರೋಗ ನಿಯಂತ್ರಣಕ್ಕೆ ಕಂಡುಹಿಡಿದಿರುವ ಆರ್​ಟಿಎಸ್​ಎಸ್ ಲಸಿಕೆಯನ್ನು ಮುಂದಿನ ವರ್ಷದೊಳಗಾಗಿ ಮಲೇರಿಯ ಪೀಡಿತ ರಾಷ್ಟ್ರಗಳ ಜನತೆಗೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಉದ್ದೇಶಿಸಿದೆ. ಸೋಮವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಡಬ್ಲ್ಯೂಎಚ್​ಒ, ಮುಂದಿನ ವರ್ಷದೊಳಗಾಗಿ ಆಫ್ರಿಕಾದ ಮೂರು ರಾಷ್ಟ್ರಗಳಾದ ಘಾನ, ಕೀನ್ಯಾ ಮತ್ತು ಮಲಾವಿಯ ಜನತೆಗೆ ಲಸಿಕೆ ನೀಡಲಾಗುತ್ತದೆ. ಆಫ್ರಿಕಾದ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಮಲೇರಿಯ ಪ್ರಕರಣಗಳು ಕಂಡುಬರುತ್ತಿದ್ದು, ಅಧಿಕ ಸಾವು ಸಂಭವಿಸುತ್ತಿದೆ. ಆರ್​ಟಿಎಸ್​ಎಸ್ ಲಸಿಕೆಯು ಸೊಳ್ಳೆಯಿಂದ ಹರಡುವ ಮಲೇರಿಯ ರೋಗ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಡಬ್ಲ್ಯೂಎಚ್​ಒ ತಿಳಿಸಿದೆ. ಲಸಿಕೆಯನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಮಲೇರಿಯ ಪಡೀತರಿಗೆ ನಾಲ್ಕು ಬಾರಿ ಲಸಿಕೆ ನೀಡಬೇಕಾಗುತ್ತದೆ. ಪ್ರತಿ ಮೂರು ತಿಂಗಳಿಗೆ ಒಂದು ಮತ್ತು ನಾಲ್ಕನೇ ಲಸಿಕೆಯನ್ನು 18 ತಿಂಗಳ ನಂತರ ತೆಗೆದುಕೊಳ್ಳಬೇಕಿದೆ. ಮಲೇರಿಯದಿಂದ ಆಫ್ರಿಕಾದಲ್ಲಿ ಅತಿ ಹೆಚ್ಚಿನ ಸಾವು ಸಂಭವಿಸುತ್ತಿದೆ.

ಪ್ರಚಲಿತ ವಿದ್ಯಮಾನ : 26 ಏಪ್ರಿಲ್ 2017 : 15 ಸಾರ್ವಜನಿಕ ರಜೆ ರದ್ದುಗೊಳಿಸಿದ ಆದಿತ್ಯನಾಥ್

ನವದೆಹಲಿ: ಅಧಿಕಾರಕ್ಕೇರಿದಾಗಿನಿಂದ ಹಲವು ಜನಪ್ರಿಯ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಮೆಚ್ಚುಗೆ ಗಳಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 15 ಸಾರ್ವಜನಿಕ ರಜೆಗಳನ್ನು ರದ್ದುಗೊಳಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರ ಈ ಕ್ರಮಕ್ಕೆ ಸಹಜವಾಗಿಯೇ ಪರ-ವಿರೋಧದ ಟೀಕೆಗಳು ವ್ಯಕ್ತವಾಗಿವೆ.
ಪ್ರಮುಖವಾಗಿ ಮಿಲಾದ್-ಉನ್-ನಬಿ, ಛತ್ ಮತ್ತು ವಾಲ್ಮೀಕಿ ಜಯಂತಿ ಅಂಗವಾಗಿ ನೀಡಲಾಗುತ್ತಿದ್ದ ರಜೆಗೂ ಕತ್ತರಿ ಹಾಕಲಾಗಿದೆ. ಬಿಜೆಪಿ ಸರ್ಕಾರ ಸ್ಥಾಪಿಸಿರುವ ಹಲವು ರಾಜ್ಯಗಳಲ್ಲಿ ಮಿಲಾದ್ ಉನ್ ನಬಿ (ಪ್ರೊಫೆಟ್ ಮೊಹಮ್ಮದ್ ಜನ್ಮದಿನ) ಅಂಗವಾಗಿ ಸರ್ಕಾರಿ ರಜೆ ನೀಡಲಾಗುತ್ತಿದೆ. ಮಿಲಾದ್ ಉನ್ ನಬಿ ಹಾಗೂ ಅಲ್ವಿದಾ (ಈದ್​ಗೂ ಮುನ್ನ ರಮ್ಜಾನ್ ಕೊನೆಯ ದಿನ) ಅಂಗವಾಗಿ ನೀಡಲಾಗುತ್ತಿರುವ ರಜೆಯನ್ನೂ ಸರ್ಕಾರ ರದ್ದು ಮಾಡಿರುವುದು ಮುಸ್ಲಿಂ ಮುಖಂಡರು ಹುಬ್ಬೇರಿಸುವಂತೆ ಮಾಡಿದೆ.
‘ವಿಶೇಷ ದಿನಗಳಂದು ನೀಡುವ ರಜೆಗಳನ್ನು ರದ್ದುಮಾಡುವ ಉತ್ತರಪ್ರದೇಶದ ಕ್ರಮ ದುರದೃಷ್ಟಕರ. ಕೆಲವು ಹಬ್ಬಗಳನ್ನು ಮುಸ್ಲಿಂ ಸಮುದಾಯದವರೇ ಆಚರಿಸಿದರೂ ಹಿಂದೂಗಳು ಪಾಲ್ಗೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಿಲಾದ್ ಉನ್ ನಬಿ ಅಂಗವಾಗಿ ನೀಡುವ ರಜೆಯು ಕೇಂದ್ರದಲ್ಲಿ ಯು.ಪಿ. ಸಿಂಗ್ ನೇತೃತ್ವದ ಸರ್ಕಾರ ಇದ್ದಾಗಿನಿಂದಲೂ ನೀಡಲಾಗುತ್ತಿದೆ’ ಎಂದು ಮುಸ್ಲಿಂ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ.
‘ಬೇರೆ ಸಮುದಾಯಗಳ ಪ್ರಮುಖರ ಜಯಂತಿ ಅಂಗವಾಗಿ ನೀಡಲಾಗುತ್ತಿದ್ದ ರಜೆಯನ್ನು ಸರ್ಕಾರ ರದ್ದು ಮಾಡಿರುವುದರಿಂದ ಇದು ಉದ್ದೇಶಪೂರ್ವಕವಾಗಿ ಕೈಗೊಂಡ ನಿರ್ಧಾರ ಎನಿಸುವುದಿಲ್ಲ’ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ ಕಲ್ಬೆ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.