ಮಲೇರಿಯಾ ರೋಗ ನಿಯಂತ್ರಣಕ್ಕೆ ಕಂಡುಹಿಡಿದಿರುವ ಆರ್ಟಿಎಸ್ಎಸ್ ಲಸಿಕೆಯನ್ನು ಮುಂದಿನ ವರ್ಷದೊಳಗಾಗಿ ಮಲೇರಿಯ ಪೀಡಿತ ರಾಷ್ಟ್ರಗಳ ಜನತೆಗೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಉದ್ದೇಶಿಸಿದೆ. ಸೋಮವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಡಬ್ಲ್ಯೂಎಚ್ಒ, ಮುಂದಿನ ವರ್ಷದೊಳಗಾಗಿ ಆಫ್ರಿಕಾದ ಮೂರು ರಾಷ್ಟ್ರಗಳಾದ ಘಾನ, ಕೀನ್ಯಾ ಮತ್ತು ಮಲಾವಿಯ ಜನತೆಗೆ ಲಸಿಕೆ ನೀಡಲಾಗುತ್ತದೆ. ಆಫ್ರಿಕಾದ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಮಲೇರಿಯ ಪ್ರಕರಣಗಳು ಕಂಡುಬರುತ್ತಿದ್ದು, ಅಧಿಕ ಸಾವು ಸಂಭವಿಸುತ್ತಿದೆ. ಆರ್ಟಿಎಸ್ಎಸ್ ಲಸಿಕೆಯು ಸೊಳ್ಳೆಯಿಂದ ಹರಡುವ ಮಲೇರಿಯ ರೋಗ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಡಬ್ಲ್ಯೂಎಚ್ಒ ತಿಳಿಸಿದೆ. ಲಸಿಕೆಯನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಮಲೇರಿಯ ಪಡೀತರಿಗೆ ನಾಲ್ಕು ಬಾರಿ ಲಸಿಕೆ ನೀಡಬೇಕಾಗುತ್ತದೆ. ಪ್ರತಿ ಮೂರು ತಿಂಗಳಿಗೆ ಒಂದು ಮತ್ತು ನಾಲ್ಕನೇ ಲಸಿಕೆಯನ್ನು 18 ತಿಂಗಳ ನಂತರ ತೆಗೆದುಕೊಳ್ಳಬೇಕಿದೆ. ಮಲೇರಿಯದಿಂದ ಆಫ್ರಿಕಾದಲ್ಲಿ ಅತಿ ಹೆಚ್ಚಿನ ಸಾವು ಸಂಭವಿಸುತ್ತಿದೆ.
K P S C
Wednesday, 26 April 2017
ಪ್ರಚಲಿತ ವಿದ್ಯಮಾನ : 26 ಏಪ್ರಿಲ್ 2017 : 15 ಸಾರ್ವಜನಿಕ ರಜೆ ರದ್ದುಗೊಳಿಸಿದ ಆದಿತ್ಯನಾಥ್
ನವದೆಹಲಿ: ಅಧಿಕಾರಕ್ಕೇರಿದಾಗಿನಿಂದ ಹಲವು ಜನಪ್ರಿಯ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಮೆಚ್ಚುಗೆ ಗಳಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 15 ಸಾರ್ವಜನಿಕ ರಜೆಗಳನ್ನು ರದ್ದುಗೊಳಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರ ಈ ಕ್ರಮಕ್ಕೆ ಸಹಜವಾಗಿಯೇ ಪರ-ವಿರೋಧದ ಟೀಕೆಗಳು ವ್ಯಕ್ತವಾಗಿವೆ.
ಪ್ರಮುಖವಾಗಿ ಮಿಲಾದ್-ಉನ್-ನಬಿ, ಛತ್ ಮತ್ತು ವಾಲ್ಮೀಕಿ ಜಯಂತಿ ಅಂಗವಾಗಿ ನೀಡಲಾಗುತ್ತಿದ್ದ ರಜೆಗೂ ಕತ್ತರಿ ಹಾಕಲಾಗಿದೆ. ಬಿಜೆಪಿ ಸರ್ಕಾರ ಸ್ಥಾಪಿಸಿರುವ ಹಲವು ರಾಜ್ಯಗಳಲ್ಲಿ ಮಿಲಾದ್ ಉನ್ ನಬಿ (ಪ್ರೊಫೆಟ್ ಮೊಹಮ್ಮದ್ ಜನ್ಮದಿನ) ಅಂಗವಾಗಿ ಸರ್ಕಾರಿ ರಜೆ ನೀಡಲಾಗುತ್ತಿದೆ. ಮಿಲಾದ್ ಉನ್ ನಬಿ ಹಾಗೂ ಅಲ್ವಿದಾ (ಈದ್ಗೂ ಮುನ್ನ ರಮ್ಜಾನ್ ಕೊನೆಯ ದಿನ) ಅಂಗವಾಗಿ ನೀಡಲಾಗುತ್ತಿರುವ ರಜೆಯನ್ನೂ ಸರ್ಕಾರ ರದ್ದು ಮಾಡಿರುವುದು ಮುಸ್ಲಿಂ ಮುಖಂಡರು ಹುಬ್ಬೇರಿಸುವಂತೆ ಮಾಡಿದೆ.
‘ವಿಶೇಷ ದಿನಗಳಂದು ನೀಡುವ ರಜೆಗಳನ್ನು ರದ್ದುಮಾಡುವ ಉತ್ತರಪ್ರದೇಶದ ಕ್ರಮ ದುರದೃಷ್ಟಕರ. ಕೆಲವು ಹಬ್ಬಗಳನ್ನು ಮುಸ್ಲಿಂ ಸಮುದಾಯದವರೇ ಆಚರಿಸಿದರೂ ಹಿಂದೂಗಳು ಪಾಲ್ಗೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಿಲಾದ್ ಉನ್ ನಬಿ ಅಂಗವಾಗಿ ನೀಡುವ ರಜೆಯು ಕೇಂದ್ರದಲ್ಲಿ ಯು.ಪಿ. ಸಿಂಗ್ ನೇತೃತ್ವದ ಸರ್ಕಾರ ಇದ್ದಾಗಿನಿಂದಲೂ ನೀಡಲಾಗುತ್ತಿದೆ’ ಎಂದು ಮುಸ್ಲಿಂ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ.
‘ಬೇರೆ ಸಮುದಾಯಗಳ ಪ್ರಮುಖರ ಜಯಂತಿ ಅಂಗವಾಗಿ ನೀಡಲಾಗುತ್ತಿದ್ದ ರಜೆಯನ್ನು ಸರ್ಕಾರ ರದ್ದು ಮಾಡಿರುವುದರಿಂದ ಇದು ಉದ್ದೇಶಪೂರ್ವಕವಾಗಿ ಕೈಗೊಂಡ ನಿರ್ಧಾರ ಎನಿಸುವುದಿಲ್ಲ’ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ ಕಲ್ಬೆ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಚಲಿತ ವಿದ್ಯಮಾನ : 26 ಏಪ್ರಿಲ್ 2017 : ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ: ಸಿಎಂ
ಗುಂಡ್ಲುಪೇಟೆ: ‘ಸರ್ಕಾರಿ ಕಚೇರಿಗಳಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅಳವಡಿಸುವ ಸಂಬಂಧ ಸುತ್ತೋಲೆ ಹೊರಡಿಸಲು ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಲ್ಲಿನ ಮಹದೇವ ಪ್ರಸಾದ್ ನಗರದಲ್ಲಿ ಬುಧವಾರ ನಡೆದ ಮತದಾರರಿಗೆ ಕೃತಜ್ಞತಾ ಸಮರ್ಪಣಾ ಸಲ್ಲಿಕೆ ಸಮಾವೇಶದಲ್ಲಿ ಅವರು ಮಾತನಾಡಿದರು.
ನಿನ್ನೆಯಷ್ಟೆ ಮಹಾರಾಷ್ಟ್ರ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಅಳವಡಿಸುವ ಸಂಬಂಧ ಆದೇಶ ಹೊರಡಿಸಿತ್ತು. ಇದರಿಂದ ಬಸವಣ್ಣನ ತವರು ರಾಜ್ಯವಾದ ಕರ್ನಾಟಕದಲ್ಲೂ ಇಂಥ ಕ್ರಮಕೈಗೊಳ್ಳಬೇಕು ಎಂಬ ಕೂಗು ವಿವಿಧ ಸ್ತರಗಳಿಂದ ಕೇಳಿ ಬಂದಿತ್ತು.
12ನೇ ಶತಮಾನದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಮಹತ್ತರ ಹೆಜ್ಜೆ ಇಟ್ಟಿದ್ದ ಬಸವಣ್ಣ, ಅನುಭವ ಮಂಟದ ಮೂಲಕ ಎಲ್ಲ ಸಮುದಾಯವರಿಗೂ ಸಮಾನ ಅವಕಾಶ ನೀಡುವ ನಿಯಮ ಜಾರಿಗೆ ತಂದಿದ್ದರು. ತಮ್ಮ ಕ್ರಾಂತಿಕಾರಿ ನಡೆಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಜಾತಿ ಪದ್ಧತಿ, ಮೌಢ್ಯದ ವಿರುದ್ಧ ಹೋರಾಟ ನಡೆಸಿದ್ದರು.
ಪ್ರಚಲಿತ ವಿದ್ಯಮಾನ : 26 ಏಪ್ರಿಲ್ 2017 : ಭಾರತೀಯರೇ, ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ಬನ್ನಿ
ಭಾರತೀಯರೇ, ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ಬನ್ನಿ
| ಮೇರಿ ಕೇ ಲಾಸ್ ಕಾರ್ಲ್ಸ್ಸನ್ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ 10 ಲಕ್ಷಕ್ಕೂ ಅಧಿಕ ವಿದೇಶಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆಯುತ್ತಿದ್ದು, ಇದರಲ್ಲಿ ಭಾರತೀಯ ವಿದ್ಯಾರ್ಥಿಗಳ ಪ್ರಮಾಣ 1.66 ಲಕ್ಷದಷ್ಟಿದೆ. ಕಳೆದೆರಡು ವರ್ಷಗಳಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ವರ್ಷವೂ ಅಮೆರಿಕದ 4,500 ಪ್ರಮಾಣೀಕೃತ ಶೈಕ್ಷಣಿಕ ಸಂಸ್ಥೆಗಳಿಂದ ಉನ್ನತ ವ್ಯಾಸಂಗಕ್ಕೆ ದಾಖಲಾಗುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಆಹ್ವಾನ ಕಳುಹಿಸಲಾಗಿದ್ದು, ಅವರಿಗೆಲ್ಲಾ ಅಭಿನಂದನೆಗಳು. ಅಮೆರಿಕ ವಿಶ್ವವಿದ್ಯಾಲಯಗಳಲ್ಲಿ ಓದಿ ಪದವಿ ಪಡೆದವರೆಲ್ಲ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಉಭಯ ದೇಶಗಳ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯಗಳ ನಡುವಣ ಸಹಭಾಗಿತ್ವಕ್ಕೆ ಒತ್ತಾಸೆ ನೀಡುವುದು ಅಮೆರಿಕದ ರಾಯಭಾರ ಕಚೇರಿಯ ಪ್ರಮುಖ ಆದ್ಯತೆಯಾಗಿದ್ದು, ಪ್ರತಿಭಾವಂತ ಭಾರತೀಯ ವಿದ್ಯಾರ್ಥಿಗಳನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ.
ಅಮೆರಿಕದಲ್ಲಿ ಓದುವ ಬಗ್ಗೆ ಚಿಂತನೆ ನಡೆಸುತ್ತಿದ್ದರೆ, ಕೂಲಂಕಷವಾದ ಪರಿಶೀಲನೆ ಅಗತ್ಯವಾಗಿದೆ. ತುಲನೆ ಮಾಡಿ ಅತ್ಯುತ್ತಮವಾದುದನ್ನು ಆಯ್ದುಕೊಳ್ಳಬೇಕು. ಎಜ್ಯುಕೇಶನ್ಯುುಎಸ್ಎ (educationusa.state.gov)ಗೆ ಭೇಟಿ ನೀಡಿ ಶೈಕ್ಷಣಿಕ ಸಂಸ್ಥೆಗಳು, ಲಭ್ಯವಿರುವ ಕೋರ್ಸ್ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಭಾರತದಲ್ಲಿ ಏಳು ಎಜ್ಯುಕೇಶನ್ ಯುಎಸ್ಎ ಸಲಹಾ ಕೇಂದ್ರಗಳಿದ್ದು, ಇವುಗಳಿಂದಲೂ ನಿಖರ ಮತ್ತು ಸಮಗ್ರ ಮಾಹಿತಿ ಸಿಗುತ್ತವೆ. ಈ ಬಾರಿ ಎಜ್ಯುಕೇಷನ್ಯುುಎಸ್ಎ ಭಾರತದ 7 ನಗರಗಳು ಮತ್ತು ಸಲಹಾಕೇಂದ್ರಗಳಿಗೆ ಭೇಟಿ ನೀಡಲಿದೆ. ಅಮೆರಿಕದ ಶಿಕ್ಷಣ ಸಂಸ್ಥೆಗಳು ವೈವಿಧ್ಯತೆಗೆ ಆದ್ಯತೆ ನೀಡುತ್ತಿದ್ದು, ವಿಭಿನ್ನ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಬೆಂಬಲಿಸುತ್ತದೆ. ವಿದ್ಯಾರ್ಥಿಗಳು ಹೊತ್ತುತರುವ ವಿಶಿಷ್ಟ ಮತ್ತು ವೈವಿಧ್ಯಮಯ ದೃಷ್ಟಿಕೋನಗಳನ್ನು ಅಮೆರಿಕದ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಗೌರವಿಸುತ್ತವೆ. ಸದ್ಯದ ಅಂಕಿಅಂಶಗಳಂತೆ ಅಮೆರಿಕಕ್ಕೆ ಉನ್ನತ ವ್ಯಾಸಂಗ ಪಡೆದುಕೊಳ್ಳಲು ಬರುವ ಪ್ರತಿ ಆರು ವಿದೇಶಿ ವಿದ್ಯಾರ್ಥಿಗಳಲ್ಲಿ ಓರ್ವ ಭಾರತೀಯನಿರುತ್ತಾನೆ. ಇವರು ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಿದ್ದು, ವಿಶ್ವವಿದ್ಯಾಲಯ ಮತ್ತು ತಮ್ಮ ಸುತ್ತಮುತ್ತಲಿನ ಸಮುದಾಯಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಅಮೆರಿಕಕ್ಕೆ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕಲ್ಯಾಣ ಪ್ರಮುಖ ಆದ್ಯತೆಯಾಗಿದ್ದು, ಇದಕ್ಕಾಗಿಯೇ ನೂತನ ಆಂದೋಲನ You Are Welcome Here ಅಮೆರಿಕದ ವಿವಿಗಳು ನಡೆಸುತ್ತಿವೆ. ಇಲ್ಲಿನ ವಿವಿಗಳ ಕ್ಯಾಂಪಸ್ಸಿನ ಗುಣಮಟ್ಟ ಉತ್ತಮವಾಗಿದ್ದು, ಈ ಹಿಂದೆ ಇಲ್ಲಿ ವಿದ್ಯಾಭ್ಯಾಸ ಪಡೆದುಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ನವೆಂಬರ್ನಲ್ಲಿ ಅಂತಾರಾಷ್ಟ್ರೀಯ ಶಿಕ್ಷಣ ಸಪ್ತಾಹದ ಅಂಗವಾಗಿ ಅಮೆರಿಕ ರಾಯಭಾರ ಕಚೇರಿ ಸರಣಿ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತೀಯ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ನಿಮ್ಮ ಬದುಕು ಮತ್ತು ವೃತ್ತಿಜೀವನದ ಗುರಿಗಳನ್ನು ತಲುಪಲು ನೆರವಾಗುವ ನಿಟ್ಟಿನಲ್ಲಿ ಮೌಲ್ಯಯುತ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ನಮ್ಮ ಕಾಲೇಜುಗಳು ನಿಮ್ಮ ಸ್ವಾಗತಕ್ಕೆ ಸಜ್ಜಾಗಿವೆ. ಅವರೊಂದಿಗೆ ನಾನೂ ದನಿ ಗೂಡಿಸುತ್ತಿರುವೆ ಅಮೆರಿಕಕ್ಕೆ ನಿಮಗಿದೋ ಸ್ವಾಗತ.
Subscribe to:
Posts (Atom)